Friday, October 15, 2010

ನನ್ನ ಅಪ್ಪ ಹೇಳುತ್ತಿದ್ದ ಕಗ್ಗ.....

ಮುಂದೇನೊ, ಮತ್ತೇನೊ ಇಂದಿಗಾ ಮಾತೇಕೆ?
ಸಂದರ್ಭ ಬರಲಿ, ಬಂದಾಗಳಾ ಚಿಂತೆ
ಹೊಂದಿಸುವವನಾರೊ, ನಿನ್ನಾಳಲ್ಲ... ಬೇರಿಹನು
ಇಂದಿಗಿಂದಿನ ಬದುಕು.... ಮಂಕುತಿಮ್ಮಾ.....


ಹಾಗಂತ, ಅಲ್ಪ ಆದಾಯದ ಕನ್ನಡ ಮೇಷ್ತ್ರು ನನ್ನಪ್ಪ. ತಿಂಗಳ ಕೊನೆಗೆ ಸಂಬಳ ದ ಹಣ ಮುಗಿಯುತ್ತಿದ್ದರೂ " ಆಟಕ್ಕೆ " ಹೋಗಲು ಇದ್ದ ಕೊನೆಯ ನೋಟನ್ನ ಖರ್ಚು ಮಾಡಬೇಡಿ ಎಂದು ಅಮ್ಮ ಗೋಗರೆಯುವಾಗ ಹೇಳಿದ್ದು. ಹೌದು. ಅಪ್ಪನಿಗೆ ಕಷ್ಟಕ್ಕೆ ಬೇರೆಯವರಿದ್ದರು.

ಇಂದಿನ ಸಾಪ್ಟುವೇರು ಕುಳಗಳಿಗಳಿಗೆ ಮಾಸ್ಟ್ರುಗಳಿಗೂ ಇದು ಉಲ್ಟವಾಗಿದೆಯೋ ಎಂದು ನನಗನಿಸಿದರೆ ತಪ್ಪೇ? ಬೇರೆಯವರಿಹರು ಇಂದೇ "ಬದುಕನನುಭವಿಸುವಾ" ಎನ್ನುವರೇ ಹೆಚ್ಹಿನವರು... ಯಾರೂ ಹೆಗಲು ಮುಟ್ಟದಿರಿ.....?

ಕಾಲಾಯ.. ತಸ್ಮೆಯ್ಯೀ ನಮಃ........

Sunday, October 10, 2010

ಆಸ್ಪತ್ರೆಗೆ ನಿಮ್ಮ ಸಂಭ್ಹಂದಿಕರು ಸೇರಿದ್ದಾರಾ? ನೋಡಲು ಹೋಗಿದ್ದೀರಾ?

ನಮ್ಮ ಮನೆ ಪುತ್ತೂರು ನಗರದ ಮದ್ಯ ಭಾಗದ ಗದ್ದೆ ಬಯಲಿನ ಕರೆ ಯ ಗುಡ್ದದಲ್ಲಿದೆ. ಬಸ್ಸು ನಿಲ್ದಾಣ ಮುರು ನಿಮಿಷದ ದಾರಿ.

ಕಳೆದ ೪೦ ..೫೦ ... ಮರುಷ ದಿಂದ ನಾನು ನಮ್ಮ ನೆಂಟರು ಆಸ್ಪತ್ರೆ ವಾಸಿ ಗಳಾದಾಗ ಅವರಿಗೆ ನನ್ನ ಅಪ್ಪ ಅಮ್ಮನ ಹತ್ತರೆ ಕೇಳದೆ " ಅಯ್ಯೋ... ನಿಂಗೊ ಹೊಟೆಲ್ ಊಟ ಮಾಡಡಿ ಯನ್ನ ಮನೆಂದ ಊಟ ತಪ್ಪಲಕ್ಕು ಯೆಂದು ಬಂದು ಬಿಡುತ್ತಿದ್ದರು. ನನಗೆ ಒಳಗೊಳಗೇ ಬಾರಿ ಖುಷಿ. ಅವರ ಊಟದ ಸಾಗಾಟ ನೆಪ ದಲ್ಲಿ ನನ್ಗೆ ಪೇಟೆ ಗೆ ಹೋಗಬಹುದು, ಮಾಲಿಂಗೇಶ್ವರ ದೇವಳಕ್ಕೆ ಹೋಗಿ, ಅರುಣಾ ಸಿನೆಮಾ ದ ವಾಲ್ ಪೋಸ್ಟು ನೋಡಿ ನನ್ನ ಪುಟ್ಟಣ್ಣ ನ ಅಪ್ಪಣೆಯಂತೆ ನೆಕ್ಸ್ಟು ಚೇಂಜು ಯಾವುದು ಹಾಗೂ ಈಗಿನ ಸಿನೆಮಾ ಕಡೇದಿನ ಯಾವಾಗ ಯೆಂದು ನೋಡ ಬಹುದಲ್ಲಾ.

ಹಾಗೆ ಎಷ್ಟೊ ಬಾರಿ ನನಗೆ ಅವಕಾಶ ಸಿಕ್ಕಿತ್ತು.

ಆಗ ನನಗೆ ಕಂಡ ಕೇಳಿದ ಸಾಮನ್ಯ ಮಾತುಗಳು.

ರೋಗಿ ಗುಣ ವಾಗುತ್ತಿದ್ದರೆ : ಡಾಕ್ಟರಿಗೇ ಅಚ್ಚರಿ ಯಾಗಿತ್ತು.. ಇಷ್ಟು ಬೇಗ ಗುಣ ಆದ್ದು ನೋಡಿ.
ಗುಣವಾಗದೆ ಜೋರಾದರೆ : ಡಾಕ್ಟರಿಗೆ ಗೊತ್ತಾಗಿಲ್ಲಾ.

ನನಗೆ ಹೀಗನಿಸಿದೆ ನಿಮಗೆ?

ನನಗೆ ಛೀ ಕಾಡು ಪ್ರಾಣಿ ಆತ... ಎಂದಾಗ ಅಂದವರ ಮೇಲೆ ನ್ಯಾಶನಲ್ ಜಿಯೋಗ್ರಫಿ ಚ್ಯಾನಲ್ ನೊಡಿಲ್ಲ ಅನಿಸುತ್ತದೆ.