Thursday, November 25, 2010

ನೋಡಿ ಶ್ರೀ ಮರಿಯಪ್ಪ ಶಾಸ್ತ್ರಿಗಳ ಸಂಗ್ರಹ.ಹವ್ಯಕ ದಲ್ಲಿ.

ದಿ.ಚ.ಮರಿಯಪ್ಪ ಶಾಸ್ತ್ರಿಗಳು. ನಿವ್ರತ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರು. ನನಗೆ ;’ಬೊಂಬೋಚ್ಹ್ಚಿ.’ ತಮ್ಮ ಚಿಕ್ಕ ಪ್ರಾಯದಲ್ಲಿ ಅನಾರೋಗ್ಯ ನಿಮಿತ್ತ ತೆಂಗಿನ ಮರ ದಿಂದ ಬೊಂಡ ತೆಗೆಸಿ ಕುಡಿಯುವಾಗ ತನ್ನ ಅಣ್ಣನ ಮಕ್ಕಳಿಗೂ ತೆಗೆಸಿ ಕೊಡುತ್ತಿದ್ದರಂತೆ. ಈ ಮಕ್ಕಳ ಬಾಲ ಬಾಷೆ ಬೊಂಡಅಪ್ಪಚ್ಚಿ ... ಬೊಂಬಪ್ಪಚ್ಚಿ ಆಯಿತು.

ಇವರು ನಾನು ಕಂಡ ಮಕ್ಕಳ ಜೀವಾನುನುಭವದಲ್ಲಿ ನೋಡಿಯೇ ತಿಳಕೊಂಡ ಶ್ರೇಷ್ಟ ಮಕ್ಕಳ ಮನಃಶ್ಯಾಸ್ತ್ರಜ್ನ.
ನಾನು ’ ವಿವೇಕಾನಂದ ಶಾಲೆಯಾ ಸಂಚಾಲಕ ನಾಗಿದ್ದಾಗ ನನಗೆ ನೀಡಿದ್ದ ಪುಸ್ತಕದ ಪ್ರತಿಇದು.

ದಿ. ಚ. ಮರಿಯಪ್ಪ ಶಾಸ್ತ್ರಿಗಳು, ನನ್ನ ಬೊಂಬಪ್ಪಚ್ಚಿ. ಮಣಿಲಾ ದ " ನವ ಮಣಿಲ: ಮನೆ, ಹವ್ಯಕ ಜಾನಪದ ಶಿಶು ಗೀತೆ ಸಂಗ್ರಾಹಕರು

Wednesday, November 24, 2010


ಇವರು ಯಾರು ಬಲ್ಲಿರ‍ೇನು?
ಹವ್ಯಕ ಸಮಾಜದಲ್ಲಿ ೧೬ ,೧೭ನೇ ಶತಮಾನದಲ್ಲಿ ಮಡೆಕೇರಿ ಅರಸರಿಂದ ಪುರಸ್ಕ್ರತರಾದ ಮೂಡಂಬೈಲು ಶಾಸ್ತ್ರಿ ಮನೆತನದವರು.
’ಮಣಿಲಾ ಶಾಸ್ತ್ರಿ ಸಹೋದರರು.
ನನಗೆ ತಿಳಿದಂತೆ ಆ ಒಂದು ಕಾಲದಲ್ಲಿ ಸುಮಾರಾಗಿ 1945 ರಲ್ಲಿ ಮನೆ ಯಜಮಾನ ಅಕಾಲ ವಿಧಿವಶರಾದಾಗ ಈ ಎಂಟೂ ಜನ ಸಹೋದರು ಸುಮಾರು ಹದಿನೈದು ವರ್ಷಗಳ ಕಾಲ ತಮ್ಮ ಕೊನೆಯ ತಮ್ಮನ ಮದುವೆ ಆಗುವವರೆಗೂ ಸಮಷ್ಟಿ ಕುಟುಂಬ ದ ಜೀವನ ವನ್ನು ಸಮಾಜಕ್ಕೆ ಆದರ್ಶವಾಗಿ ನಡೆಸಿದರು. ಜೆಲ್ಲೆಗೆ ಪ್ರಸಿದ್ದವಾದ " ಪರಿಯಾಲ್ತಡ್ಕ ಹೈಯರ್ ಪ್ರೈಮರಿ" ಶಾಲೆ ಯಲ್ಲಿ ಸಾಂಸ್ಕ್ರತಿಕ ವೈಭವದ ವಾರ್ಷಿಕ ಜಾತ್ರೆಯನ್ನೆ ನಡೆಸಿ ವಿದ್ಯಾಸಂಸ್ಥೆಗಳ ಸ್ಥಾಪನೆಯ ಕನಸು ಕಂಡ ಧೀಮಂತರಿವರು.
ಇಂದಿನ ವಿವೇಕಾನಂದ ಎಜುಕೇಶನ್ ಸೊಸೈಟಿ ನಡೆಸುತ್ತಿರುವ :ಪುಣಚಾ ಶ್ರೀದೇವಿ ಹೈಸ್ಕೂಲ್ ನ ಸ್ಥಾಪನೆಗೆ ಮೂಲ ಪ್ರೇರಕರು.
ಇವರ ಪರಿಚಯ ಮಾಡಿಸಲು ನಾನು ತುಂಬಾ ಹೆಮ್ಮೆ ಪಡುತ್ತೇನೆ.
ಹವ್ಯಕ ಸಮಾಜದಲ್ಲಿ ಇಂದೂ ಇವರ ಮುಂದಿನ ತಲೆಮಾರು ತನಗೆ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಗೌರವಾದರಗಳನ್ನು ಉಳಿಸಿ ಕೊಂಡಿದ್ದು ಉತ್ತಮ ಸ್ಥಾನಮಾನ ಹೊಂದಿದ್ದಾರೆ.
ಇವರ ವಿಶೇಷತೆಗಳನ್ನ ನೋಡಿರಿ.
ಈ ಎಂಟೂ ಸಹೋದರರಿಗೆ ಇಪ್ಪತ್ತಮೂರು ಜನ ಗಂಡು ಮಕ್ಕಳು ಹಾಗೂ ಇಪ್ಪತ್ತಮೂರು ಜನ ಹೆಣ್ಣು ಮಕ್ಕಳು.
ಎಲ್ಲರಿಗೂ ಮದುವೆ ಆಗಿದೆ. ತಕ್ಕ ಮಟ್ಟಿಗೆ ಚೆನ್ನಾಗಿದ್ದಾರೆ. .... ಮುಂದುವರಿಯುವುದು.

Thursday, November 4, 2010

ದೇವರ ಮುಂದೆ ದೀಪ ಹಚ್ಚುವಾಗ ನನಗನಿಸಿತು ಒಮ್ಮೆ ಹೀಗೆ.... ನಿಮಗೆ....

ದೇವರ ಎದುರು ದೀಪ ಹಚ್ಚಿಟ್ಟಿರುವುದು,
ಅವರಿವರ ತಳ್ಳಿ ಎದುರಿನ ಎರಡು ತಲೆ ಮದ್ಯೆ ಮುಖ ತೂರಿಸಿ...
ಎಕ್ಕಳಿಸಿ...
ನಿಮಗೆ ದೇವರನ್ನು ನೋಡುವ ನಿಮ್ಮ ಭ್ರಮೆಗಲ್ಲದಿರಬಹುದು....
ಕತ್ತಲಲ್ಲೂ ನಮ್ಮ ಮುಖದಲ್ಲಿರುವ ದಿನದ ತಪ್ಪಿನ ಭಾವ ದೇವರಿಗೇ... ಕಾಣಲೆಂದು.. ಇರಬಹುದು...
ಅದಕ್ಕೆಂದೇ...... ದೃಷ್ಟಿ ಇಡದೇ ಭಯಪಡುತ್ತಾ ಕಣ್ಣು ಮುಚ್ಚಿ ತಲೆ ಬಾಗಿ ನಮಸ್ಕರಿಸುವುದೇ...?

ದೀಪಾವಳಿ ದಿನ ದೀಪ ಹಚ್ಚುವುದೆಲ್ಲಿ.?

ನೀವು ನನ್ನೆದುರು ಬಂದು ನಿಂದರೆ, ಒಂದು ದೀಪ ಹಚ್ಚುವೆ...
ಜಗವೆಲ್ಲ ಬೆಳಗಲಿ ಎಂದಲ್ಲ....?
ನಿಮ್ಮ ನನ್ನ ಮುಖದ ದುಗುಡ ದುಮ್ಮಾನ ಸಿಟ್ಟು, ಸೆಡವು...
ಪ್ರೀತಿ ವಾತ್ಸಲ್ಯ ಕಾಣಲೆಂದು.....











(ನನಗೆ ನನ್ನನ್ನೂ ಕನ್ನಡ ಶಾಲೆ ಯ ಜತೆ ಬೆಳೆಸಿದ ನನ್ನ ಹಿರಿಯ ಸ್ನೇಹಿತರಂತಿರುವ ಗುರು ಸಮಾನರಾದ ಶ್ರೀ ರಘುನಾಥ ರಾವ್ ಅವರು ಶ್ರೀ ಶಿವರುದ್ರಪ್ಪ ನವರ ಕವನ ಆಧಾರ ದಲ್ಲಿ ಕಳುಹಿಸಿದ ದೀಪ ಹಚ್ಚುವ ದಿನಕ್ಕೆ ಕಳಿಸಿದ ಶುಭಾಶಯಕ್ಕೆ ನನ್ನ ಮನದ ಭಾವ ಇದು.)